ಪೋಸ್ಟ್‌ಗಳು

ವಾಲ್ಮೀಕಿ ಮಹರ್ಷಿ:

ಇಮೇಜ್
ಜನನ: -> ಕ್ರಿ.ಪೂ.500 ರಲ್ಲಿ ಜನಿಸಿದರು. -> ಮೂಲನೆಲೆ-ಕರ್ನಾಟಕದ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ 'ಹವಣಿ' ಎಂಬ ಪ್ರದೇಶ -> ಮೂಲ ಹೆಸರು - ರತ್ನಾಕರ. -> ಪ್ರಚೇತಸ ಮುನಿಯ ಮಗನಾದುದರಿಂದ 'ಪ್ರಚೇತಸ'  ಎಂಬ ಹೆಸರೂ ಇದೆ. -> ವಾಲ್ಮೀಕಿ ಮೂಲತಃ ಬೇಟೆಗಾರರ ಬುಡಕಟ್ಟಿಗೆ ಸೇರಿದ ಬೇಡ ಸಮುದಾಯದವರು.ಋಷಿಗಳ ಉಪದೇಶದಿಂದ ಜ್ಞಾನೋದಯವಾಗಿ ಮಹರ್ಷಿಗಳಾದರು ಎಂಬ ಕಥೆ ಜನಮಾನಸದಲ್ಲಿ ಪ್ರಚಲಿತದಲ್ಲಿದೆ. ರಾಮಾಯಣ ರಚನೆ: -> ತಮಸಾ ನದಿ ತೀರದಲ್ಲಿ ಸಂತೋಷದಿಂದ ಹಾರಾಡುತ್ತಿದ್ದ ಕ್ರೌಂಚ ಪಕ್ಷಿ ಜೋಡಿಗೆ ಬೇಡನೊಬ್ಬ ಬಾಣ ಹೂಡಿ ಗಂಡು ಹಕ್ಕಿಯನ್ನು ಕೊಂದು ಬಿಡುತ್ತಾನೆ.ಅದರ ಸಂಗಾತಿ ಹೆಣ್ಣು ಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ.ಈ ಹೃದಯವಿದ್ರಾವಕ ಸನ್ನಿವೇಶ ನೋಡಿ ವಾಲ್ಮೀಕಿ ಮಹರ್ಷಿ ಒಂದು ಶ್ಲೋಕ ರಚಿಸುತ್ತಾರೆ. -> ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ಅದೇ ಶ್ಲೋಕರೂಪದಲ್ಲಿ ರಾಮಾಯಣ ರಚಿಸಲು ಹೇಳುತ್ತಾನೆ -> ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು 24 ಸಾವಿರ ಶ್ಲೋಕಗಳನ್ನೊಳಗೊಂಡ ಮಹಾಕಾವ್ಯವಾಗಿ ಬರೆದರು. ವಾಲ್ಮೀಕಿ ಮಹರ್ಷಿಗಳ ವಿಶೇಷತೆ: -> ವಾಲ್ಮೀಕಿ ಭಾರತದ ಆದಿಕವಿ, ರಾಮಾಯಣ ಆದೀ ಕಾವ್ಯವಾಗಿದೆ. -> ವಾಲ್ಮೀಕಿ ಮಹರ್ಷಿ ಚಿಂತಕ, ಚರಿತ್ರೆಕಾರ, ಸಮಾಜ ಸುಧಾರಕ, ಶಿಕ್ಷಣತಜ್ಞ, ರಾಜನೀತಿಜ್ಞ, ತತ್ವಜ್ಞಾನಿ ಹಾಗೂ ಕವಿಯಾಗಿ ಬಹುಜನರ ಮನಸೂರೆ...

ಸರ್ವಪಲ್ಲಿ ರಾಧಾಕೃಷ್ಣನ್ (1888- 1975)

ಇಮೇಜ್
  ಜನನ ಹಾಗೂ ಬಾಲ್ಯ: -> ದಕ್ಷಿಣ ಭಾರತದ ತಮಿಳುನಾಡಿನ 'ತಿರುತ್ತಣಿ' ಎಂಬಲ್ಲಿ ಸೆಪ್ಟೆಂಬರ್ 5, 1888 ರಲ್ಲಿ ಜನನ. -> ತಂದೆ-ಸರ್ವಪಲ್ಲಿ ವೀರಸ್ವಾಮಿ,  ತಾಯಿ- ಸೀತಮ್ಮ. ವಿದ್ಯಾಭ್ಯಾಸ: -> ಸ್ಕಾಲರ್ ಶಿಪ್ ಪಡೆದುಕೊಂಡೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದರು. -> ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ 'ತತ್ವಜ್ಞಾನ' ವಿಷಯದ ಮೇಲೆ ಬಿಎ ಮತ್ತು ಎಂಎ ಪದವಿಯನ್ನು ಪಡೆದರು. ವಿವಾಹ: -> ತಮ್ಮ 16ನೇ ವಯಸ್ಸಿನಲ್ಲಿ ಶಿವಕಾಮಮ್ಮ ಎಂಬುವವರನ್ನು ವಿವಾಹವಾದರು. ಸಾಮಾಜಿಕ ಹಾಗೂ ರಾಜಕೀಯ ಸೇವೆ: -> 1909 ರಲ್ಲಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಸೇವೆಯನ್ನಾರಂಭಿಸಿದರು. -> 1918 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದರು. -> 1931 ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಆಯ್ಕೆಗೊಂಡು ಐದು ವರ್ಷ ಕಾಲದ ಸೇವೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಕೈಗೊಂಡರು. -> 1939 ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿದರು. -> 1949 ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡರು. -> ಭಾರತದ ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ ಆಯ್ಕೆಗೊಂಡರು.ಈ ಸಂದರ್ಭದಲ್ಲಿ ಮೈಸೂರು ಕಾಲೇಜಿನ ವಿದ್ಯಾರ್ಥಿಗಳು ಅಲಂಕಾರಿಕ ಸಾರ...

ಬುಕ್ ಪ್ರಿಯ ಅಂಬೇಡ್ಕರರು ಫೇಸ್ಬುಕ್ ಪ್ರಿಯ ಯುವಜನರು‌.

ಇಮೇಜ್
  " ದಿನಗಟ್ಟಲೇ ಆಹಾರವಿಲ್ಲದೆ ಇರಬಲ್ಲೆ ಆದರೆ ಪುಸ್ತಕಗಳಿಲ್ಲದೆ ನಾನು ಇರಲಾರೆ" ಎಂದು ಹೇಳಿ ತಮ್ಮ ಪುಸ್ತಕ ಪ್ರೇಮವನ್ನು ವ್ಯಕ್ತಪಡಿಸಿದ ಮಹಾನ್ ಚೇತನ ಡಾ// ಬಿಆರ್ ಅಂಬೇಡ್ಕರರು. ತಮ್ಮ ಪುಸ್ತಕಗಳಿಗಾಗಿಯೇ ಮುಂಬೈನಲ್ಲಿ ರಾಜಗೃಹ ಎಂಬ ಬೃಹತ್ ಬಂಗಲೆಯನ್ನು ಕಟ್ಟಿಸಿ ಸರಿಸುಮಾರು 50ಸಾವಿರಕ್ಕೂ ಹೆಚ್ಚು ಅಮೂಲ್ಯ ಪುಸ್ತಕಗಳ ಸಂಗ್ರಹವನ್ನು ಮಾಡಿದ್ದರು. ಬಂಗಲೆಯ ಶೇಕಡ 80ರಷ್ಟು ಸ್ಥಳ ಪುಸ್ತಕಗಳಿಗೆ ಮೀಸಲಿಟ್ಟು ಉಳಿದ ಕೇವಲ 20ರಷ್ಟು ಸ್ಥಳವನ್ನು ತಮ್ಮ ವಾಸಕ್ಕಾಗಿ ಬಳಸುತ್ತಿದ್ದರು ಎಂಬುದನ್ನು ತಿಳಿದರೆ ಅಂಬೇಡ್ಕರರ ಪುಸ್ತಕ ಪ್ರೇಮದ ಅಗಾಧತೆ ಅರಿವಾಗುತ್ತದೆ. ತಮ್ಮ 22ನೆಯ ವಯಸ್ಸಿನಲ್ಲಿ ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವಾಗ ಒಂದು ಹೊತ್ತಿನ ಊಟವನ್ನು ಬಿಟ್ಟು 2000 ಪುಸ್ತಕಗಳನ್ನು ಖರೀದಿಸಿದ್ದು ಒಬ್ಬ ಜ್ಞಾನದಾಹಿಗೆ ಮಾತ್ರ ಸಾಧ್ಯವಾಗುವ ಕೆಲಸವಾಗಿದೆ. ಅಂಬೇಡ್ಕರರ ಪುಸ್ತಕ ಭಂಡಾರದಲ್ಲಿ ಒಂದು ವೈವಿಧ್ಯಮಯ ಪ್ರಪಂಚವೇ ಅಡಗಿತ್ತು. ಏಕೆಂದರೆ ಪ್ರಪಂಚದಲ್ಲಿಯೇ ಇನ್ನೆಲ್ಲೂ ಲಭ್ಯವಿಲ್ಲ ಎನ್ನಬಹುದಾದ ಅನೇಕ ಅಮೂಲ್ಯ ಪುಸ್ತಕಗಳು ಅವರ ಭಂಡಾರದಲ್ಲಿದ್ದವು. ಅರ್ಥಶಾಸ್ತ್ರ, ಕಾನೂನು ಶಾಸ್ತ್ರ, ರಾಜಕೀಯ, ತತ್ವಶಾಸ್ತ್ರ, ಇತಿಹಾಸ, ಭೂಗೋಳ, ಎಲ್ಲ ಧರ್ಮಗಳ ಧರ್ಮಗ್ರಂಥಗಳು, ವಿಶ್ವದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ, ವಿವಿಧ ದೇಶಗಳ ಸಂವಿಧಾನ ಅಬ್ಬಬ್ಬಾ ಅಂಬೇಡ್ಕರ ಅಭಿರುಚಿ ಎಂತಹದ್ದು ಎಂದು ಈ ಪುಸ್ತಕಗಳೇ ತೋರಿಸಿಕೊಡುತ್...

ಬಣ್ಣಾಟ

ಇಮೇಜ್
ಏಳು ಬಣ್ಣದ ಆಟ ಇದೆ ಅದರಲ್ಲೇ ಜೀವನದ ಪಾಠ ಬಣ್ಣ ಹಳದಿ ಅರಿಸಿನ ಶಾಸ್ತ್ರ ಮದುವೆಯ ಆದಿ ಬಣ್ಣ ಹಸಿರು ಚಿಗುರುವ ಆಸೆಗಳು ನೂರು ಬಣ್ಣ ಕೇಸರಿ ಉದಯರವಿಯಂತೆ ಮಕ್ಕಳುಮರಿ ಬಣ್ಣ ನೀಲಿ ಸಂತೋಷದ ಹೊನಲು ಸಂಸಾರಸಾಗರದಲಿ ಬಣ್ಣ ಕರಿ ಕಷ್ಟಗಳೆಂಬ ಕಾರ್ಮೋಡಗಳ ಸವಾರಿ ಬಣ್ಣ ಕೆಂಪು ಎಚ್ಚರ ! ಇಳಿ ವಯಸ್ಸಿನ ಜೋಂಪು ಬಣ್ಣ ಬಿಳಿ ಎಲ್ಲ ಬಣ್ಣಗಳನ್ನು ನುಂಗಿದ ಅಂತ್ಯ ಬದುಕು ಖಾಲಿ ಖಾಲಿ. (RSPatil,LXR)

'ವಿಶ್ವ ಜಲದಿನ' ಹಿನ್ನೆಲೆ ಹಾಗೂ ಮಹತ್ವ.

ಇಮೇಜ್
        ನಮ್ಮ ಜೀವನದಲ್ಲಿ ನೀರಿಗೆ ಬಹಳ ಮಹತ್ವವಿದೆ. 'ನೀರೇ ಜೀವನ'ಎಂದು ನಾವು ಹೇಳಬಹುದು.ಜೀವನವು ನೀರಿನಿಂದ ಪ್ರಾರಂಭವಾಗುತ್ತದೆ, ನಾವು ಮಣ್ಣಿನಲ್ಲಿ ಬೀಜವನ್ನು ಬಿತ್ತಿದಾಗ ನಾವು ಅದನ್ನು ಪೋಷಿಸುವವರೆಗೂ ಅದು ಬೆಳೆಯುವುದಿಲ್ಲ, ನಾವು ಆ ಬೀಜಕ್ಕೆ ಪ್ರತಿದಿನ ನೀರನ್ನು ನೀಡುತ್ತೇವೆ ಮತ್ತು ಅದು ಒಂದು ಸಸ್ಯವಾಗಿ  ಬೆ ಳೆಯುತ್ತದೆ.        ನಾವು ಪ್ರತಿದಿನ ಸೇವಿಸುವ ಹಣ್ಣುಗಳು,ತರಕಾರಿಗಳು,ಸಿರಿಧಾನ್ಯಗಳು, ಆಹಾರ ಪದಾರ್ಥಗಳು ಇತ್ಯಾದಿ ನಮಗೆ ಲಭ್ಯವಿರುವುದು ನೀರಿನಿಂದ ಮಾತ್ರ.  ನಮ್ಮ ದಿನಚರಿಯನ್ನು ಅವಲೋಕನ ಮಾಡಿಕೊಳ್ಳುವ ಮೂಲಕ ನೀರಿನ ಮಹತ್ವವನ್ನು ನಾವು ಅರಿತುಕೊಳ್ಳಬಹುದು. ಪ್ರಪಂಚದ ಜನಸಂಖ್ಯೆಯು ಹೆಚ್ಚಾಗುತ್ತಿದ್ದಂತೆ ನಾವು ವಿವಿಧ ನೈಸರ್ಗಿಕ ಸಂಪನ್ಮೂಲಗಳ ಕೊರತೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಏಕೆಂದರೆ ನಾವು ಅವುಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ.  ವಿಶ್ವದ ಕೆಲವು ದೇಶಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ, ಅದು ಅವರಿಗೆ ಬಹಳ ಹಾನಿಕಾರಕವಾಗಿದೆ.  ಉದಾಹರಣೆಗೆ ಭಾರತದಲ್ಲಿ 'ಬಿಚೋಲಿಮ್ (ಗೋವಾ)' ಮತ್ತು ಅದರ ನೆರೆಹೊರೆಯ ಪ್ರದೇಶಗಳ ನಿವಾಸಿಗಳು ತೀವ್ರ ನೀರಿನ ಸಮಸ್ಯೆಗಳನ್ನು ಎದುರಿಸಿದ್ದಾರೆ ಮತ್ತು ಪಾಕಿಸ್ತಾನದಲ್ಲಿ “ಥಾರ್” ಪ್ರದೇಶವು ತೀವ್ರ ಬರಗಾಲದಿಂದಾಗಿ ಅನೇಕ ಮಕ್ಕಳನ್ನು ಕಳೆದುಕೊಂಡಿದೆ.  ಇತರ ದೇಶಗಳಾದ ಬ್ರೆಜಿಲ್, ಚ...

ಧ್ಯಾನವು ನಿಮ್ಮ ಜೀವನವನ್ನು ಹೇಗೆ ಬದಲಾಯಿಸಬಹುದು

ಇಮೇಜ್
                 ಪ್ರಸ್ತುತ ಸಂಶೋಧನೆಯ ಪ್ರಕಾರ ಸರಾಸರಿ  ವ್ಯಕ್ತಿಯು ದಿನಕ್ಕೆ 6000 ಕ್ಕೂ ಹೆಚ್ಚುಆಲೋಚನೆಗಳನ್ನು ಮಾಡುವ ಸಾಮರ್ಥ್ಯ  ಹೊಂದಿದ್ದಾನೆ. ಆದರೆ  ಅದರಲ್ಲಿ 90 ಪ್ರತಿಶತ  ಆಲೋಚನೆಗಳು ಚಿಂತೆಯ ಪ್ರತಿರೂಪಗಳಾಗಿರುತ್ತವೆ.  ಇದಲ್ಲದೆ ಜನರು ತಮ್ಮ ಅರ್ಧದಷ್ಟು ಸಮಯವನ್ನು ಚಿಂತೆಯಲ್ಲಿ ಕಳೆಯುತ್ತಿದ್ದಾರೆ  ಮತ್ತು ಇವುಗಳಲ್ಲಿ  ಶೇಕಡಾ 90 ರಷ್ಟು ಚಿಂತೆಗಳು ಎಂದಿಗೂ ಬಗೆಹರಿಯುವುದಿಲ್ಲ. ಧ್ಯಾನವನ್ನು ಕಲಿಯುವುದು ಮತ್ತು ಅಭ್ಯಾಸ ಮಾಡುವುದರಿಂದ ಅನಗತ್ಯ ಚಿಂತೆಗಳಿಂದ ನಮ್ಮನ್ನು ಮುಕ್ತಗೊಳಿಸಬಹುದು. ಹಾಗೆಯೇ  ನಮ್ಮ ಗ್ರಹಿಕೆ ಮತ್ತು ಇಂದ್ರಿಯಗಳನ್ನು ಉತ್ಕೃಷ್ಟಗೊಳಿಸಬಹುದು.  ಪ್ರಪಂಚದಾದ್ಯಂತ ವಿವಿಧ ಧ್ಯಾನ ಸಂಪ್ರದಾಯಗಳು ಮತ್ತು ತಂತ್ರಗಳು ಅಸ್ತಿತ್ವದಲ್ಲಿದ್ದರೂ, ಅವುಗಳನ್ನು ಸರಿಸುಮಾರು ನಾಲ್ಕು ವಿಶಾಲ ವರ್ಗಗಳಾಗಿ ವಿಂಗಡಿಸಬಹುದು: ಏಕಾಗ್ರತೆ ಧ್ಯಾನ, ಪ್ರತಿಫಲಿತ (ಅಥವಾ ಒಳನೋಟ) ಧ್ಯಾನ, ಸಾವಧಾನತೆ ಧ್ಯಾನ ಮತ್ತು ಸೃಜನಶೀಲ ಧ್ಯಾನ. ಏಕಾಗ್ರತೆ ಧ್ಯಾನ: ಏಕಾಗ್ರತೆ ಧ್ಯಾನವು  ಎಲ್ಲ ರೀತಿಯ ಗೊಂದಲಗಳನ್ನು ನಿವಾರಿಸಲು ಮತ್ತು ಮಾನಸಿಕ ಗಮನವನ್ನು ಕಾಪಾಡಿಕೊಳ್ಳಲು  ಅತ್ಯಗತ್ಯವಾಗಿದೆ.  ಸಮತಟ್ಟಾದ ಮೇಲ್ಮೈಯಲ್ಲಿ ನೀರನ್ನು ಮುಕ್ತವಾಗಿ ಸುರಿಯುವುದನ್ನು ಕಲ್ಪಿಸಿಕೊಳ್ಳಿ;  ಇದು ತಕ್ಷಣವೇ ಆಳವ...

ನಿಮ್ಮ ಸೃಜನಶೀಲ ಪ್ರತಿಭೆಗೆ ಏಳು ಕೀಗಳು

ಇಮೇಜ್
          ನಿಮ್ಮ ನೈಸರ್ಗಿಕ ಸೃಜನಶೀಲತೆಯನ್ನು ನೀವು ತ್ವರಿತವಾಗಿ ಪ್ರವೇಶಿಸಲು ಮತ್ತು ನೀವು ಇಷ್ಟಪಡುವ ಯಾವುದನ್ನಾದರೂ ರಚಿಸಲು ಏಳು  ಮಾರ್ಗಗಳು ಇಲ್ಲಿವೆ. 1.1.1.  ಮಗುವಿನಂತೆ  ಯೋಚಿಸಿ.               ವಯಸ್ಕರಾದ ನಾವು ಎಷ್ಟು ಬುದ್ಧಿವಂತರು ಎಂಬುದನ್ನು ತೋರಿಸುವ ಉದ್ದೇಶದಿಂದ ನಿಯಮಾಧೀನ ರೀತಿಯಲ್ಲಿ ಯೋಚಿಸಲು ಒಲವು ತೋರುತ್ತೇವೆ.  ಆದರೆ ಮಕ್ಕಳಾಗಿದ್ದಾಗ ನಾವು ಸರಳವಾಗಿ,ಸ್ವಾಭಾವಿಕವಾಗಿ  ನಮ್ಮ ಆಲೋಚನೆಯಲ್ಲಿ ಹೆಚ್ಚು ಸೃಜನಶೀಲರಾಗಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ. ಕುತೂಹಲವನ್ನು ಪುನಃ ಸೆರೆಹಿಡಿಯಲು, ವಿಷಯಗಳನ್ನು ಆಶ್ಚರ್ಯಪಡಲು, ಹೆಚ್ಚು ಸೃಜನಶೀಲರಾಗಲು ಮಗುವಿನಂತೆ ಯೋಚಿಸಲು ಆರಂಭಿಸಿ.   2.  ಸಂಪರ್ಕಗಳನ್ನು  ಏರ್ಪಡಿಸಿ          ಸೃಜನಶೀಲರಾಗಲು ವಿಶ್ವವಿದ್ಯಾಲಯಗಳ ಪದವಿ ಅಗತ್ಯವಿಲ್ಲ.  ಅಸ್ತಿತ್ವದಲ್ಲಿರುವ ಆಲೋಚನೆಗಳ ನಡುವೆ ಉತ್ತಮ ಸಂಪರ್ಕವನ್ನು ಏರ್ಪಡಿಸುವ ಅಗತ್ಯವಿದೆ.  ಉದಾಹರಣೆಗೆ ಕ್ರಿ.ಪೂ 2000 ರಲ್ಲಿ ಐಸ್ ಕ್ರೀಮ್ ಅನ್ನು ಕಂಡುಹಿಡಿಯಲಾಯಿತು  ಆದರೆ  'ಕೋನ್' ಕಲ್ಪನೆಯೊಂದಿಗೆ ಬರಲು ಇನ್ನೂ 3900 ವರ್ಷಗಳನ್ನು ತೆಗೆದುಕೊಳ್ಳಲಾಯಿತು.  ನೀವು ಸಂಬಂಧವಿಲ್ಲದ ಎರಡು ವಸ್ತುಗಳನ್ನು ಅಥವಾ ವಿಷಯಗಳನ್ನು ತೆಗೆದುಕೊಂ...