ಬಣ್ಣಾಟ
ಏಳು ಬಣ್ಣದ ಆಟ
ಇದೆ ಅದರಲ್ಲೇ ಜೀವನದ ಪಾಠ
ಬಣ್ಣ ಹಳದಿ
ಅರಿಸಿನ ಶಾಸ್ತ್ರ ಮದುವೆಯ ಆದಿ
ಬಣ್ಣ ಹಸಿರು
ಚಿಗುರುವ ಆಸೆಗಳು ನೂರು
ಬಣ್ಣ ಕೇಸರಿ
ಉದಯರವಿಯಂತೆ ಮಕ್ಕಳುಮರಿ
ಬಣ್ಣ ನೀಲಿ
ಸಂತೋಷದ ಹೊನಲು
ಸಂಸಾರಸಾಗರದಲಿ
ಬಣ್ಣ ಕರಿ
ಕಷ್ಟಗಳೆಂಬ ಕಾರ್ಮೋಡಗಳ ಸವಾರಿ
ಬಣ್ಣ ಕೆಂಪು
ಎಚ್ಚರ ! ಇಳಿ ವಯಸ್ಸಿನ ಜೋಂಪು
ಬಣ್ಣ ಬಿಳಿ
ಎಲ್ಲ ಬಣ್ಣಗಳನ್ನು ನುಂಗಿದ ಅಂತ್ಯ
ಬದುಕು ಖಾಲಿ ಖಾಲಿ.
(RSPatil,LXR)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ