ಪೋಸ್ಟ್‌ಗಳು

ಅಕ್ಟೋಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಾಲ್ಮೀಕಿ ಮಹರ್ಷಿ:

ಇಮೇಜ್
ಜನನ: -> ಕ್ರಿ.ಪೂ.500 ರಲ್ಲಿ ಜನಿಸಿದರು. -> ಮೂಲನೆಲೆ-ಕರ್ನಾಟಕದ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ 'ಹವಣಿ' ಎಂಬ ಪ್ರದೇಶ -> ಮೂಲ ಹೆಸರು - ರತ್ನಾಕರ. -> ಪ್ರಚೇತಸ ಮುನಿಯ ಮಗನಾದುದರಿಂದ 'ಪ್ರಚೇತಸ'  ಎಂಬ ಹೆಸರೂ ಇದೆ. -> ವಾಲ್ಮೀಕಿ ಮೂಲತಃ ಬೇಟೆಗಾರರ ಬುಡಕಟ್ಟಿಗೆ ಸೇರಿದ ಬೇಡ ಸಮುದಾಯದವರು.ಋಷಿಗಳ ಉಪದೇಶದಿಂದ ಜ್ಞಾನೋದಯವಾಗಿ ಮಹರ್ಷಿಗಳಾದರು ಎಂಬ ಕಥೆ ಜನಮಾನಸದಲ್ಲಿ ಪ್ರಚಲಿತದಲ್ಲಿದೆ. ರಾಮಾಯಣ ರಚನೆ: -> ತಮಸಾ ನದಿ ತೀರದಲ್ಲಿ ಸಂತೋಷದಿಂದ ಹಾರಾಡುತ್ತಿದ್ದ ಕ್ರೌಂಚ ಪಕ್ಷಿ ಜೋಡಿಗೆ ಬೇಡನೊಬ್ಬ ಬಾಣ ಹೂಡಿ ಗಂಡು ಹಕ್ಕಿಯನ್ನು ಕೊಂದು ಬಿಡುತ್ತಾನೆ.ಅದರ ಸಂಗಾತಿ ಹೆಣ್ಣು ಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ.ಈ ಹೃದಯವಿದ್ರಾವಕ ಸನ್ನಿವೇಶ ನೋಡಿ ವಾಲ್ಮೀಕಿ ಮಹರ್ಷಿ ಒಂದು ಶ್ಲೋಕ ರಚಿಸುತ್ತಾರೆ. -> ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ಅದೇ ಶ್ಲೋಕರೂಪದಲ್ಲಿ ರಾಮಾಯಣ ರಚಿಸಲು ಹೇಳುತ್ತಾನೆ -> ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು 24 ಸಾವಿರ ಶ್ಲೋಕಗಳನ್ನೊಳಗೊಂಡ ಮಹಾಕಾವ್ಯವಾಗಿ ಬರೆದರು. ವಾಲ್ಮೀಕಿ ಮಹರ್ಷಿಗಳ ವಿಶೇಷತೆ: -> ವಾಲ್ಮೀಕಿ ಭಾರತದ ಆದಿಕವಿ, ರಾಮಾಯಣ ಆದೀ ಕಾವ್ಯವಾಗಿದೆ. -> ವಾಲ್ಮೀಕಿ ಮಹರ್ಷಿ ಚಿಂತಕ, ಚರಿತ್ರೆಕಾರ, ಸಮಾಜ ಸುಧಾರಕ, ಶಿಕ್ಷಣತಜ್ಞ, ರಾಜನೀತಿಜ್ಞ, ತತ್ವಜ್ಞಾನಿ ಹಾಗೂ ಕವಿಯಾಗಿ ಬಹುಜನರ ಮನಸೂರೆ...