ಧ್ಯಾನವು ನಿಮ್ಮ ಜೀವನವನ್ನು ಹೇಗೆ ಬದಲಾಯಿಸಬಹುದು
ಪ್ರಸ್ತುತ ಸಂಶೋಧನೆಯ ಪ್ರಕಾರ ಸರಾಸರಿ ವ್ಯಕ್ತಿಯು ದಿನಕ್ಕೆ 6000 ಕ್ಕೂ ಹೆಚ್ಚುಆಲೋಚನೆಗಳನ್ನು ಮಾಡುವ ಸಾಮರ್ಥ್ಯ ಹೊಂದಿದ್ದಾನೆ. ಆದರೆ ಅದರಲ್ಲಿ 90 ಪ್ರತಿಶತ ಆಲೋಚನೆಗಳು ಚಿಂತೆಯ ಪ್ರತಿರೂಪಗಳಾಗಿರುತ್ತವೆ. ಇದಲ್ಲದೆ ಜನರು ತಮ್ಮ ಅರ್ಧದಷ್ಟು ಸಮಯವನ್ನು ಚಿಂತೆಯಲ್ಲಿ ಕಳೆಯುತ್ತಿದ್ದಾರೆ ಮತ್ತು ಇವುಗಳಲ್ಲಿ ಶೇಕಡಾ 90 ರಷ್ಟು ಚಿಂತೆಗಳು ಎಂದಿಗೂ ಬಗೆಹರಿಯುವುದಿಲ್ಲ. ಧ್ಯಾನವನ್ನು ಕಲಿಯುವುದು ಮತ್ತು ಅಭ್ಯಾಸ ಮಾಡುವುದರಿಂದ ಅನಗತ್ಯ ಚಿಂತೆಗಳಿಂದ ನಮ್ಮನ್ನು ಮುಕ್ತಗೊಳಿಸಬಹುದು. ಹಾಗೆಯೇ ನಮ್ಮ ಗ್ರಹಿಕೆ ಮತ್ತು ಇಂದ್ರಿಯಗಳನ್ನು ಉತ್ಕೃಷ್ಟಗೊಳಿಸಬಹುದು. ಪ್ರಪಂಚದಾದ್ಯಂತ ವಿವಿಧ ಧ್ಯಾನ ಸಂಪ್ರದಾಯಗಳು ಮತ್ತು ತಂತ್ರಗಳು ಅಸ್ತಿತ್ವದಲ್ಲಿದ್ದರೂ, ಅವುಗಳನ್ನು ಸರಿಸುಮಾರು ನಾಲ್ಕು ವಿಶಾಲ ವರ್ಗಗಳಾಗಿ ವಿಂಗಡಿಸಬಹುದು: ಏಕಾಗ್ರತೆ ಧ್ಯಾನ, ಪ್ರತಿಫಲಿತ (ಅಥವಾ ಒಳನೋಟ) ಧ್ಯಾನ, ಸಾವಧಾನತೆ ಧ್ಯಾನ ಮತ್ತು ಸೃಜನಶೀಲ ಧ್ಯಾನ. ಏಕಾಗ್ರತೆ ಧ್ಯಾನ: ಏಕಾಗ್ರತೆ ಧ್ಯಾನವು ಎಲ್ಲ ರೀತಿಯ ಗೊಂದಲಗಳನ್ನು ನಿವಾರಿಸಲು ಮತ್ತು ಮಾನಸಿಕ ಗಮನವನ್ನು ಕಾಪಾಡಿಕೊಳ್ಳಲು ಅತ್ಯಗತ್ಯವಾಗಿದೆ. ಸಮತಟ್ಟಾದ ಮೇಲ್ಮೈಯಲ್ಲಿ ನೀರನ್ನು ಮುಕ್ತವಾಗಿ ಸುರಿಯುವುದನ್ನು ಕಲ್ಪಿಸಿಕೊಳ್ಳಿ; ಇದು ತಕ್ಷಣವೇ ಆಳವ...