ಪೋಸ್ಟ್‌ಗಳು

ಏಪ್ರಿಲ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬುಕ್ ಪ್ರಿಯ ಅಂಬೇಡ್ಕರರು ಫೇಸ್ಬುಕ್ ಪ್ರಿಯ ಯುವಜನರು‌.

ಇಮೇಜ್
  " ದಿನಗಟ್ಟಲೇ ಆಹಾರವಿಲ್ಲದೆ ಇರಬಲ್ಲೆ ಆದರೆ ಪುಸ್ತಕಗಳಿಲ್ಲದೆ ನಾನು ಇರಲಾರೆ" ಎಂದು ಹೇಳಿ ತಮ್ಮ ಪುಸ್ತಕ ಪ್ರೇಮವನ್ನು ವ್ಯಕ್ತಪಡಿಸಿದ ಮಹಾನ್ ಚೇತನ ಡಾ// ಬಿಆರ್ ಅಂಬೇಡ್ಕರರು. ತಮ್ಮ ಪುಸ್ತಕಗಳಿಗಾಗಿಯೇ ಮುಂಬೈನಲ್ಲಿ ರಾಜಗೃಹ ಎಂಬ ಬೃಹತ್ ಬಂಗಲೆಯನ್ನು ಕಟ್ಟಿಸಿ ಸರಿಸುಮಾರು 50ಸಾವಿರಕ್ಕೂ ಹೆಚ್ಚು ಅಮೂಲ್ಯ ಪುಸ್ತಕಗಳ ಸಂಗ್ರಹವನ್ನು ಮಾಡಿದ್ದರು. ಬಂಗಲೆಯ ಶೇಕಡ 80ರಷ್ಟು ಸ್ಥಳ ಪುಸ್ತಕಗಳಿಗೆ ಮೀಸಲಿಟ್ಟು ಉಳಿದ ಕೇವಲ 20ರಷ್ಟು ಸ್ಥಳವನ್ನು ತಮ್ಮ ವಾಸಕ್ಕಾಗಿ ಬಳಸುತ್ತಿದ್ದರು ಎಂಬುದನ್ನು ತಿಳಿದರೆ ಅಂಬೇಡ್ಕರರ ಪುಸ್ತಕ ಪ್ರೇಮದ ಅಗಾಧತೆ ಅರಿವಾಗುತ್ತದೆ. ತಮ್ಮ 22ನೆಯ ವಯಸ್ಸಿನಲ್ಲಿ ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವಾಗ ಒಂದು ಹೊತ್ತಿನ ಊಟವನ್ನು ಬಿಟ್ಟು 2000 ಪುಸ್ತಕಗಳನ್ನು ಖರೀದಿಸಿದ್ದು ಒಬ್ಬ ಜ್ಞಾನದಾಹಿಗೆ ಮಾತ್ರ ಸಾಧ್ಯವಾಗುವ ಕೆಲಸವಾಗಿದೆ. ಅಂಬೇಡ್ಕರರ ಪುಸ್ತಕ ಭಂಡಾರದಲ್ಲಿ ಒಂದು ವೈವಿಧ್ಯಮಯ ಪ್ರಪಂಚವೇ ಅಡಗಿತ್ತು. ಏಕೆಂದರೆ ಪ್ರಪಂಚದಲ್ಲಿಯೇ ಇನ್ನೆಲ್ಲೂ ಲಭ್ಯವಿಲ್ಲ ಎನ್ನಬಹುದಾದ ಅನೇಕ ಅಮೂಲ್ಯ ಪುಸ್ತಕಗಳು ಅವರ ಭಂಡಾರದಲ್ಲಿದ್ದವು. ಅರ್ಥಶಾಸ್ತ್ರ, ಕಾನೂನು ಶಾಸ್ತ್ರ, ರಾಜಕೀಯ, ತತ್ವಶಾಸ್ತ್ರ, ಇತಿಹಾಸ, ಭೂಗೋಳ, ಎಲ್ಲ ಧರ್ಮಗಳ ಧರ್ಮಗ್ರಂಥಗಳು, ವಿಶ್ವದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ, ವಿವಿಧ ದೇಶಗಳ ಸಂವಿಧಾನ ಅಬ್ಬಬ್ಬಾ ಅಂಬೇಡ್ಕರ ಅಭಿರುಚಿ ಎಂತಹದ್ದು ಎಂದು ಈ ಪುಸ್ತಕಗಳೇ ತೋರಿಸಿಕೊಡುತ್...