ವಾಲ್ಮೀಕಿ ಮಹರ್ಷಿ:


ಜನನ:

-> ಕ್ರಿ.ಪೂ.500 ರಲ್ಲಿ ಜನಿಸಿದರು.

-> ಮೂಲನೆಲೆ-ಕರ್ನಾಟಕದ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ 'ಹವಣಿ' ಎಂಬ ಪ್ರದೇಶ

-> ಮೂಲ ಹೆಸರು - ರತ್ನಾಕರ.

-> ಪ್ರಚೇತಸ ಮುನಿಯ ಮಗನಾದುದರಿಂದ 'ಪ್ರಚೇತಸ'  ಎಂಬ ಹೆಸರೂ ಇದೆ.

-> ವಾಲ್ಮೀಕಿ ಮೂಲತಃ ಬೇಟೆಗಾರರ ಬುಡಕಟ್ಟಿಗೆ ಸೇರಿದ ಬೇಡ ಸಮುದಾಯದವರು.ಋಷಿಗಳ ಉಪದೇಶದಿಂದ ಜ್ಞಾನೋದಯವಾಗಿ ಮಹರ್ಷಿಗಳಾದರು ಎಂಬ ಕಥೆ ಜನಮಾನಸದಲ್ಲಿ ಪ್ರಚಲಿತದಲ್ಲಿದೆ.


ರಾಮಾಯಣ ರಚನೆ:

-> ತಮಸಾ ನದಿ ತೀರದಲ್ಲಿ ಸಂತೋಷದಿಂದ ಹಾರಾಡುತ್ತಿದ್ದ ಕ್ರೌಂಚ ಪಕ್ಷಿ ಜೋಡಿಗೆ ಬೇಡನೊಬ್ಬ ಬಾಣ ಹೂಡಿ ಗಂಡು ಹಕ್ಕಿಯನ್ನು ಕೊಂದು ಬಿಡುತ್ತಾನೆ.ಅದರ ಸಂಗಾತಿ ಹೆಣ್ಣು ಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ.ಈ ಹೃದಯವಿದ್ರಾವಕ ಸನ್ನಿವೇಶ ನೋಡಿ ವಾಲ್ಮೀಕಿ ಮಹರ್ಷಿ ಒಂದು ಶ್ಲೋಕ ರಚಿಸುತ್ತಾರೆ.

-> ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ಅದೇ ಶ್ಲೋಕರೂಪದಲ್ಲಿ ರಾಮಾಯಣ ರಚಿಸಲು ಹೇಳುತ್ತಾನೆ

-> ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು 24 ಸಾವಿರ ಶ್ಲೋಕಗಳನ್ನೊಳಗೊಂಡ ಮಹಾಕಾವ್ಯವಾಗಿ ಬರೆದರು.


ವಾಲ್ಮೀಕಿ ಮಹರ್ಷಿಗಳ ವಿಶೇಷತೆ:

-> ವಾಲ್ಮೀಕಿ ಭಾರತದ ಆದಿಕವಿ, ರಾಮಾಯಣ ಆದೀ ಕಾವ್ಯವಾಗಿದೆ.

-> ವಾಲ್ಮೀಕಿ ಮಹರ್ಷಿ ಚಿಂತಕ, ಚರಿತ್ರೆಕಾರ, ಸಮಾಜ ಸುಧಾರಕ, ಶಿಕ್ಷಣತಜ್ಞ, ರಾಜನೀತಿಜ್ಞ, ತತ್ವಜ್ಞಾನಿ ಹಾಗೂ ಕವಿಯಾಗಿ ಬಹುಜನರ ಮನಸೂರೆಗೊಂಡಿದ್ದಾರೆ.

-> ವಾಲ್ಮೀಕಿ ತಮ್ಮ ರಾಮಾಯಣದಲ್ಲಿ ರಾಜಾಡಳಿತದ ಸಮಗ್ರ ವಿಚಾರಗಳನ್ನು ಚಿತ್ರಿಸಿ ಪ್ರಜಾಪ್ರಭುತ್ವದ ಪರಿಕಲ್ಪನೆಯ ಅರಿವನ್ನು ಮೂಡಿಸಿದ್ದಾರೆ.

-> ವಾಲ್ಮೀಕಿ ರಚಿತ ರಾಮಾಯಣ ಅಖಂಡ ಭಾರತ ದೇಶದ ಮೊದಲ ಕಾವ್ಯ. ಸಂಸ್ಕೃತದಲ್ಲಿ ಇದು ರಚಿತವಾಗಿದೆ. ಜಗತ್ತಿನ ಮಹಾಕಾವ್ಯಗಳ ಸಾಲಿನಲ್ಲಿ ಇದಕ್ಕೆ ಪ್ರಮುಖ ಸ್ಥಾನ ಲಭಿಸಿದೆ.


-> ಉತ್ತರ ರಾಮಾಯಣದಲ್ಲಿ ಲಕ್ಷ್ಮಣ ಕಾಡಿನಲ್ಲಿ ಬಿಟ್ಟು ಹೋದ ಸೀತೆಗೆ ಆಶ್ರಯಕೊಟ್ಟು ಲವಕುಶರ ಜನನದ ನಂತರ ಅವರಿಗೆ ಸಕಲ ವಿದ್ಯೆಗಳನ್ನು ಕಲಿಸಿಕೊಡುತ್ತಾರೆ.ಇಡೀ ರಾಮಾಯಣದ ಕಥೆಯನ್ನು ಲವಕುಶರಿಗೆ ಹಾಡಿನ ರೂಪದಲ್ಲಿ ಹೇಳಿಕೊಡುತ್ತಾರೆ.


->"ಕೂಜಂತಂ ರಾಮ ರಾಮೇತಿ | ಮಧುರ ಮಧುರಾಕ್ಷರಮ್ ||ಆರುಹ್ಯ ಕವಿತಾಶಾಖಾಂ | ವಂದೇ ವಾಲ್ಮೀಕಿ ಕೋಕಿಲಮ್||

ಈ ಸುಂದರವಾದ ರೂಪಕಾಲಂಕಾರದಿಂದ ಕೂಡಿದ ಸಾಲುಗಳು ವಾಲ್ಮೀಕಿ ಮುನಿಯನ್ನು ವಂದಿಸುವ , ನಮಸ್ಕರಿಸುವ ಶ್ಲೋಕವಾಗಿದೆ.

-> ಅರ್ಥ:

'ಕಾವ್ಯವೆಂಬ ಮರದ ಮೇಲೆ ಕುಳಿತು, 'ರಾಮ ರಾಮಾ' ಎಂದು (ಕೂಜಂತಮ್ ಹಕ್ಕಿಯ ಇಂಪಾದ ಧ್ವನಿ) ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ವಂದೇ-ನಮಸ್ಕಾರ.

-> ವಾಲ್ಮೀಕಿ ಎಂಬುವರು ಓರ್ವ ಮಹರ್ಷಿ ಆಗಿರದೇ ಶ್ರೇಷ್ಠತೆಗೆ, ಮಹಾನ್ ಶಕ್ತಿಗೆ, ದಿವ್ಯ ಭಾರತೀಯ ಪರಂಪರೆಗೆ ಶ್ರೇಷ್ಠ ನಿದರ್ಶನವಾಗಿದ್ದಾರೆ.

(RSPATIL, Laxmeshwar)









ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಿಮ್ಮ ಸೃಜನಶೀಲ ಪ್ರತಿಭೆಗೆ ಏಳು ಕೀಗಳು