ಸರ್ವಪಲ್ಲಿ ರಾಧಾಕೃಷ್ಣನ್ (1888- 1975)
ಜನನ ಹಾಗೂ ಬಾಲ್ಯ:
-> ದಕ್ಷಿಣ ಭಾರತದ ತಮಿಳುನಾಡಿನ 'ತಿರುತ್ತಣಿ' ಎಂಬಲ್ಲಿ ಸೆಪ್ಟೆಂಬರ್ 5, 1888 ರಲ್ಲಿ ಜನನ.
-> ತಂದೆ-ಸರ್ವಪಲ್ಲಿ ವೀರಸ್ವಾಮಿ,
ತಾಯಿ- ಸೀತಮ್ಮ.
ವಿದ್ಯಾಭ್ಯಾಸ:
-> ಸ್ಕಾಲರ್ ಶಿಪ್ ಪಡೆದುಕೊಂಡೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದರು.
-> ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ 'ತತ್ವಜ್ಞಾನ' ವಿಷಯದ ಮೇಲೆ ಬಿಎ ಮತ್ತು ಎಂಎ ಪದವಿಯನ್ನು ಪಡೆದರು.
ವಿವಾಹ:
-> ತಮ್ಮ 16ನೇ ವಯಸ್ಸಿನಲ್ಲಿ ಶಿವಕಾಮಮ್ಮ ಎಂಬುವವರನ್ನು ವಿವಾಹವಾದರು.
ಸಾಮಾಜಿಕ ಹಾಗೂ ರಾಜಕೀಯ ಸೇವೆ:
-> 1909 ರಲ್ಲಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಸೇವೆಯನ್ನಾರಂಭಿಸಿದರು.
-> 1918 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದರು.
-> 1931 ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಆಯ್ಕೆಗೊಂಡು ಐದು ವರ್ಷ ಕಾಲದ ಸೇವೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಕೈಗೊಂಡರು.
-> 1939 ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿದರು.
-> 1949 ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡರು.
-> ಭಾರತದ ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ ಆಯ್ಕೆಗೊಂಡರು.ಈ ಸಂದರ್ಭದಲ್ಲಿ ಮೈಸೂರು ಕಾಲೇಜಿನ ವಿದ್ಯಾರ್ಥಿಗಳು ಅಲಂಕಾರಿಕ ಸಾರೋಟಿನಲ್ಲಿ ತಾವೇ ಕುದುರೆಗಳಾಗಿ ರೈಲ್ವೆ ನಿಲ್ದಾಣದವರೆಗೂ ಎಳೆದುಕೊಂಡು ಹೋಗಿ ಗೌರವ ಸೂಚಿಸಿದರು.
-> 1962 ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಗೊಂಡು ದೇಶದ ಸೇವೆ ಸಲ್ಲಿಸಿದರು.
ಶಿಕ್ಷಣ ತಜ್ಞರಾಗಿ ಸೇವೆ:
-> ಭಾರತೀಯ ಶಿಕ್ಷಣಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ ಶಿಕ್ಷಣ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು.
-> ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಬಂಧಗಳನ್ನು ಉನ್ನತೀಕರಣಗಳಿಸುತ್ತಾ ದೇಶವನ್ನು ಸುಭಿಕ್ಷವಾಗಿಸಿದರು.
-> ಇವರ ಅವಧಿಯಲ್ಲಿ ವಿಶ್ವವಿದ್ಯಾಲಯಗಳು ಅನೇಕ ಶಿಕ್ಷಣ ಶಿಕ್ಷಣೇತರ ಸುಧಾರಣೆಗಳನ್ನು ಕಂಡವು.
ಪ್ರಶಸ್ತಿ ಮತ್ತು ಬಿರುದುಗಳು:
-> ಬ್ರಿಟನ್ ಹಾಗೂ ಅಮೆರಿಕ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದರು.
-> ಭಾರತೀಯ ವಿದ್ಯಾಭವನವು 'ಬ್ರಹ್ಮವಿದ್ಯಾಭಾಸ್ಕರ' ಎಂಬ ಬಿರುದನ್ನು ನೀಡಿ ಗೌರವ ಸೂಚಿಸಿತು.
-> 1954 ರಲ್ಲಿ ಪ್ರತಿಷ್ಠಿತ 'ಭಾರತರತ್ನ' ಪ್ರಶಸ್ತಿಗೆ ಭಾಜನರಾದರು.
ನಿಧನ:
-> 1975 ರಲ್ಲಿ ಮದ್ರಾಸಿನ ತಮ್ಮ ಅಧಿಕೃತ ನಿವಾಸದಲ್ಲಿ ಏಪ್ರಿಲ್ 17ರಂದು ನಿಧನರಾದರು.
(By RSPATIL Laxmeshwar)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ